Showing posts with label Kannada. Show all posts
Showing posts with label Kannada. Show all posts

Wednesday, May 11, 2016

ರೆಕ್ಕೆ ಹಕ್ಕಿ



ಆ ದಿನ ಒಂತರ ಹೊಸತು
ಉತ್ಸಾಹದ ಚಿಲುಮೆ ಚಿಮ್ಮಿತ್ತು
ಬಾನಿಗೆ ಏಣಿ ಹಾಕೋ ಛಲ
ಮೈದು೦ಬಿತ್ತು ಹೊಸ ಭಲ

ಬೆಟ್ಟವ  ನೆಲಸಮ ಮಾಡೋ  ಬಯಕೆ
ಹಕ್ಕಿಯಂತೆ ರೆಕ್ಕೆ ಬಿಚ್ಚೋ ಹಾರೈಕೆ
ಯೋಚಿಸಿದೆ ಇದಕ್ಕೆಲ್ಲ ಕಾರಣವೇನು
ಬೆಳ್ಳಂ  ಬೆಳಗ್ಗೆ ಕುಡಿದಿದ್ದೆ  ರೆಡ್ ಬುಲ್ಲನ್ನು

Saturday, November 28, 2015

ಸೇರಲು ನಿನ್ನ

ಸೇರಲು ನಿನ್ನ   ಕಾಯುತಿದೆ  ಮನ
ಹಾಡುತಿದೆ   ಮನ  ನಿನ್ನದೇ   ಕವನ
ಬೇಯುತಿದೆ  ವಿರಹದಿ  ಈ ನನ್ನ ತನು
ಮರೆತಿಲ್ಲ   ನಾ  ನೀ  ಹೋದ  ದಿನವನ್ನು


ಹೋದೆ  ನೀನು   ಪರದೇಶಕೆ
ನನ್ನ ಬಿಟ್ಟು  ಓ     ಅಭಿಸಾರಿಕೆ
ಅದೇ ನಾನು  ಅಂದು  ಭಗ್ನ  ಹೃದಯಿ
ನೀನೊರಲ್ಲಿ  ಬರಣ  ಅಂದ್ರೆ  ಏನ್ಮಾಡ್ಲಿ
ಜೇಬಲಿಲ್ಲ  ಹತ್ತು  ರೂಪಾಯಿ

ಅವಳು ನಕ್ಕಳು

ಅಲ್ಲಿ ಹೋಗುತಿದ್ದ  ಅವಳು
ನನ್ನ  ನೋಡಿ ಮುಗುಳ್ನ ಕ್ಕಳು
ಅದ ನೋಡಿ ಕುಣಿಯಿತು ನನ್ನ ಹೊಕ್ಕಳು
ಹತೋಟಿ ತಪ್ಪಿದ ಮನವಾಯಿತು  ತಿಕ್ಕಲು

ಅಷ್ಟರಲ್ಲೇ  ಅವಳ ಗೆಳತಿಯ  ಬೈಕ್ ಲ್ಲಿ
ಕೈಯಿಟ್ಟು  ಅವಳ ಹೆಗಲಲ್ಲಿ
ಏನನ್ನೋ ಅವಳಿಗೆ ಗುನುಗುತ್ತ
ಹೋದರತ್ತ ಇಬ್ಬರು ನಗುತ್ತ

ಸರಿ ಎಂದು ನನ್ನ ಪಾಡಿಗೆ
ಕಾಯುತ್ತ  ನಿಂತೆ ನನ್ನ  ಬಸ್ಸಿಗೆ
ಅಲ್ಲಿ  ಬಂದ  ಮತ್ತೊಬ್ಬ ಸುಂದರಿ
ನಗುತ್ತ  ನಿಂತಳು  ನನ್ನ ನೋಡಿರಿ

ನಾನು ಖುಷಿಯಿ೦ದ
ಉಲ್ಲಾಸದ ಮನದಿಂದ
ಕೆಳಗೆ  ನೋಡಿ  ಆದೆ ಬೆಪ್ಪು
ತೆರೆದಿತ್ತಲ್ಲಿ ನನ್ನ ಪ್ಯಾಂಟ್  ಜಿಪ್ಪು







ರಹಸ್ಯ

ಕಲೆತವು  ನಮ್ಮಿಬ್ಬರ  ಕಣ್ಣುಗಳು
ಬಿಸಿಯಾದವು   ಉಸಿರುಗಳು
ಝಲ್ಲೆಂದಿತು  ಹೃದಯ
ಇದು  ಮನಸುಗಳ  ವಿಷಯ


ಹೋದೆ  ನಾನು  ಅವಳಿರುವೆಡೆ
ಸುತ್ತಲೂ ಇತ್ತು ಒಂದು ದೊಡ್ಡ ಪಡೆ
ಆಕೆಯದು ಮೃದುವಾದ  ಮನಸು
ಮಾಡಲ್ಲ  ಯಾರಿಗೂ  ಮುನಿಸು

ಅದಕ್ಕೆ ಎಲ್ಲವನ್ನು ಹೇಳಿದ್ದಳು
ನಮ್ಮಿಬ್ಬರ  ರಹಸ್ಯವ  ಬಿಚ್ಚಿಟ್ಟಿದ್ದಳು
ಕಾಪಿ ಹೊಡೆದು ಸಿಕ್ಕಿ ಬಿದ್ದ ಅವಳು
ನನ್ನ  ಹೆಸರು  ಬಾಯಿ  ಬಿಟ್ಟಿದ್ದಳು 

ಮಳೆಯಲಿ ಜೊತೆಯಲಿ

ಈ ಜಿಟಿ ಜಿಟಿ ಮಳೆಯಲಿ
ಅವಳ ಜೊತೆಯಲಿ
ಛತ್ರಿಯ   ತಳದಲಿ
ಕೈ   ಹಿಡಿದು  ನಡೆಯಲು

ಕೈಗೆ  ಕೈ  ತಾಕುತ್ತ
ನಡುವಿನತ್ತ  ನನ್ನ ಚಿತ್ತ
ಮರೆತೆವು  ಹೋಗುವುದೆತ್ತ
ಜೋರಾಯ್ತು ಮಳೆಯ ಕೊರೆತ

ಮಳೆಯಲಿ ನಾವು ತೋಯುತ್ತ
ಮರೆತೆವು  ಈ ಜಗತ್ತ
ಆಯಿತು ಜೋರು ಪ್ರವಾಹ
ಇಲ್ಲವಾಯ್ತು  ನೀರಿನ ದಾಹ

ಏನಾದ್ರೂ ಸುನಾಮಿ ಬಂತಾ
ಸಮುದ್ರವು ಬಾಯಿ ತೆರಿತಾ
ಎನ್ನುತಿದ್ದ ನನ್ನ ಅಮ್ಮನ  ಕೂಗು ಎಬ್ಬಿಸಿತ್ತು
ಅಮ್ಮನ    ಕೈಲಿ   ಖಾಲಿ  ಬಕೆಟ್ ಇತ್ತು
ದೇಹ ಮಣ್ಣಿಗಾದರೆ - ಜೀವ ಕನ್ನಡಕ್ಕೆ


ರೋಮಾಂಚಕ ಮುಸ್ಸಂಜೆ


ಸೂರ್ಯಾಸ್ತದ     ಮುಸ್ಸಂಜೆ   ಕೆಂಪು
ಮಳೆ   ಚುಂಬಿಸಿದ  ಒಣಮಣ್ಣ   ಕಂಪು
ತಂಗಾಳಿಯ ಹಿತವಾದ   ತಂಪು
ಶಶಿಯ ಆಗಮನದ ಹೊಳಪು

ಇಳೆಗೆ   ಜಿನುಗೋ  ಮಂಜಿನ   ಹನಿ
ರೊಮಾಂಚಕ   ಸಮಯವಿದೆನ್ನಿ
ಪ್ರೇಮಿಗಳಿಗಿದು   ತುಂಬಾನೇ   ಇಷ್ಟ
ನಮ್ಮಂತವರಿಗೆ   ಚಡ್ಡಿ   ಒಣಗೋದು  ಕಷ್ಟ



Sunday, June 7, 2015

ಗೋಧೂಳಿಯ ಸಮಯ

ಸುಂದರ ಗೋಧೂಳಿಯ ಸಮಯ
ಸೋತೋಯ್ತು ಈ ನನ್ನ ಹೃದಯ
ಬಣ್ಣಿಸಲಾರೆ ಆ ಸಂದರ್ಭದ ಪರಿಯ
ಕದ್ದಿದ್ದರು ಡಾಕ್ಟರ್ ನನ್ನ ಕಿಡ್ನಿಯ

ಮಳೆಯಲಿ ನೆನಪಲಿ

 ನೆನೆಯುವ ಮಳೆಯಲಿ
ನೆನೆಯುತ ಅವಳಲ್ಲಿ
ನೆನಪಾದವು ಆ ಕ್ಷಣಗಳು
ಹೊತ್ತೊಯ್ದವು ಆ ದಿನಗಳು

ಭೇಟಿಯಾದ ಆ ವೇಳೆ
ಬೀಳುತಿತ್ತು ಜೋರ್ ಮಳೆ
ನಡುಗುತ್ತ ನಿಂತಿದ್ದಳಾಕೆ
ಮರೆತಿದ್ಲು ಛತ್ರಿ ತರೋಕೆ

ಆ ತೇವಾ ಸುಂದರಿಯ ನೋಡಿ
ನಿಂತವು ರಸ್ತೇಲಿ ಗಾಡಿ
ಮಾನವಿಯತೆಯಿಂದ ನಾ ಹೋದೆ ಅಲ್ಲಿ
ಇಟ್ಟೆ ನನ್ನ ಛತ್ರಿ ಅವಳ ಕೈಯಲ್ಲಿ

ಕಳೆದವು ಹಲ ದಿನಗಳು
ಅರಳಿದವು ಮರದಲಿ ಹೂಗಳು
ಇನ್ನು ಮರಳಿ ಕೊಟ್ಟಿಲ್ಲ  ಛತ್ರಿ
ಅದಕ್ಕೆ ಮಳೆ ಬಂದ್ರೆ  ಅವಳ ನೆನಪಾಗುತ್ರಿ

ಕಂಗಳು

ಸೇರಿದವಲ್ಲಿ ನಮ್ಮ ಕಂಗಳು
ಹಾಗೆ ನಡೆಯಿತು ಉಭಯ ಕುಶಲೋಪರಿಗಳು
ಅವಳ ಮತ್ತು ನನ್ನ ನಡುವೆ ಅಂತದೇನಿತ್ತು !
ನಮ್ಮ ಕಣ್ಗಳೇ ಅವನ್ಹೇಳಿತ್ತು .

ಅತಿಯಾದ ಮಾತುಗಳು ಬೇಕಿರಲಿಲ್ಲ
ಅಷ್ತೊಂದಾತ್ಮಿಯರಾಗಿದ್ದೆವಲ್ಲ
ಯಾಕಂದ್ರೆ ಅವಳಾಗಿದ್ದಳು ಕಣ್ ಡಾಕ್ಟರ್
ನಾನಾಗಿದ್ದೆ ಅವಳ ಪೇಷಂಟ್ ರೆಗ್ಯುಲರ್  .

ಮೂರ್ತಿಯ ಕೀರ್ತಿ

 ಆಕೆಯ ಸುಂದರ ವದನ ಜೀವಕ್ಕೆ ಸ್ಫೂರ್ತಿ
ಆ ಸೌಂದರ್ಯಕ್ಕೆ ನಾಚಿ ನೀರಾಯ್ತು ಬೇಲೂರ ಮೂರ್ತಿ
ಈ ನಾಡೆಲ್ಲ ತುಂಬಿದೆ ಆಕೆಯ ಕೀರ್ತಿ
ಎಲ್ಲಾ ಸರಿ ಮಗ, ಇವತ್ತ ಚಡ್ಡಿ ಹಾಕೋದ್ ಯಾಕ್ ಮರ್ತಿ 

ಗುರಿ

ಮುಖ ನೋಡಿ ಹೋಗಬೇಡ ಅವಳ ಹಿಂದೆ ಹಂಗ
ಬೆಲೆ ಕೊಡಬೇಡ ಮನಸ ಬಿಟ್ಟು ಅಂಗಾಂಗ
ಗುರಿ ಮರೆತು ಆಗ ಬೇಡ ಎಡ ಬಿಡಂಗ
ಬಿರಿಯಾನಿಗೆ ಬೇಕೇ ಬೇಕು ಲವಂಗ 

ಕ್ರೂರಿ ಜಗತ್ತು

ಈ ಜಗತ್ತು ತುಂಬಾನೇ ಕ್ರೂರಿ
ಪ್ರಯೋಜನ ಇಲ್ಲ  ದೇವರನ್ನ ಕೋರಿ
ಹೋರಾಡು ನಿನ್ನ ಭಯವನ್ನ ಮೀರಿ
ಅಡುಗೆ  ಸಕತ್ತಾಗಿ ಮಾಡ್ತಾಳ್ರಿ ಈ ಪೋರಿ 

ಫ್ರೇಮ

ಅವರಿಬ್ಬರದು ನಿಷ್ಕಲ್ಮಶ  ಪ್ರೇಮ
ಹಾಕಿದ್ದಾರೆ ಇಬ್ಬರ ಫೋಟೋಗೆ ಒಂದೇ ಫ್ರೇಮಾ
ಆಯ್ತು ಏನೋ ತಾಕಲಾಟ
ಒಡೆದ್ ಹೋಗಿದೆ ಈಗ ಆ ಫೋಟ

Saturday, April 25, 2015

ಮನಸ್ಸಾಡುತ್ತೆ

ಮಾಧುರ್ಯ ಅವಳ ಮಾತು ಒಂದ್ಸಲ ಕೇಳಿ 
ಹೃದಯ ಆಡುತ್ತೆ ಓಕುಳಿ
ಮನಸ್ಸಾಡುತ್ತೆ  ಹೋಳಿ 
ಎರಪೋರ್ಟ್ ರೋಡಲ್ಲೇ ಇರೋದು ದೇವನಹಳ್ಳಿ 
 

ಕೇಕೆ

ಅವಳ ಹಾಕ್ತಿದ್ರೆ ಕೇಕೆ
ನೋವೆಲ್ಲಾ ಹೋಗುತ್ತೆ ಜೋಕೆ
ಮತ್ಯಾಕ್ ತಡ  ಅವಳನ್ನ ಮಾತಾಡ್ಸಿ ಓಕೆ
ಏಪ್ರಿಲ್ ಬಂದರೆ ಅಲ್ವೇನ್ರಿ ತುಂಬಾ ಸೆಕೆ 

ನಾವಿಕ

ನಾನಂದೆ ನಾನೊಬ್ಬ ನಾವಿಕ
ಅದಕ್ಕ ಅವಳ೦ದಳು ಅದೆಲ್ಲ ಈಗ್ಯಾಕ
ಸಾಕು ಮಾಡು ನಿನ್ನ ನಾಟಕ
ತಿರಗ್ಸಿ ನಾನಂದೆ ನೀ ಸ್ವಲ್ಪ ಅಮಿಕ 

ಗಾಂಚಾಲಿ

ಅವಳನ್ನು ನೋಡಿ ನಾ ಹೋದೆ ಓಡಿ
ಅವಳಿಗೆ ತುಂಬಾ ಗಡಿಬಿಡಿ
ಗಾಂಚಾಲಿ ಬಿಡಿ
ಕನ್ನಡ ಮಾತಾಡಿ 

Friday, March 20, 2015

ಅವನ ಭಾವ




ತಾಳಲಾರೆ ಅಗಲಿಕೆಯ ಈ ನೋವ
ವಿವರಿಸಲೆಂತು ನನ್ನೆದೆಯ ಭಾವ
ವಿರಹ ವೇದನೆಯ ಈ ಕಾವ
ತಥ್ ಈ ಕರೆಂಟ್ ಈಗಲೇ ಹೋಗಬೇಕಿತ್ತಾ
ಮೊದ್ಲೇ ಗೊತ್ತಿದ್ರೆ ಕ್ಯಾಂಡಲ್ ತರತಿದ್ದ ಅವ

ಕೋಡು




ಆಹಾ ಎಂತ ಸೌಂದರ್ಯ ನೋಡು
ಅದಕ್ಕೆ ಅವಳಿಗೆ ತಲೆ ಮೇಲೆ ಕೋಡು
ಶಿಷ್ಯಾ ಸ್ವಲ್ಪ ಸಹಾಯ ಮಾಡು
ಮಗಾ ಅವಳಪ್ಪಾ ಬಂದಾ ಬೇಗ ಓಡು !!