ಮಳೆಯಲಿ ಜೊತೆಯಲಿ

ಈ ಜಿಟಿ ಜಿಟಿ ಮಳೆಯಲಿ
ಅವಳ ಜೊತೆಯಲಿ
ಛತ್ರಿಯ   ತಳದಲಿ
ಕೈ   ಹಿಡಿದು  ನಡೆಯಲು

ಕೈಗೆ  ಕೈ  ತಾಕುತ್ತ
ನಡುವಿನತ್ತ  ನನ್ನ ಚಿತ್ತ
ಮರೆತೆವು  ಹೋಗುವುದೆತ್ತ
ಜೋರಾಯ್ತು ಮಳೆಯ ಕೊರೆತ

ಮಳೆಯಲಿ ನಾವು ತೋಯುತ್ತ
ಮರೆತೆವು  ಈ ಜಗತ್ತ
ಆಯಿತು ಜೋರು ಪ್ರವಾಹ
ಇಲ್ಲವಾಯ್ತು  ನೀರಿನ ದಾಹ

ಏನಾದ್ರೂ ಸುನಾಮಿ ಬಂತಾ
ಸಮುದ್ರವು ಬಾಯಿ ತೆರಿತಾ
ಎನ್ನುತಿದ್ದ ನನ್ನ ಅಮ್ಮನ  ಕೂಗು ಎಬ್ಬಿಸಿತ್ತು
ಅಮ್ಮನ    ಕೈಲಿ   ಖಾಲಿ  ಬಕೆಟ್ ಇತ್ತು

Comments