Saturday, November 28, 2015

ರಹಸ್ಯ

ಕಲೆತವು  ನಮ್ಮಿಬ್ಬರ  ಕಣ್ಣುಗಳು
ಬಿಸಿಯಾದವು   ಉಸಿರುಗಳು
ಝಲ್ಲೆಂದಿತು  ಹೃದಯ
ಇದು  ಮನಸುಗಳ  ವಿಷಯ


ಹೋದೆ  ನಾನು  ಅವಳಿರುವೆಡೆ
ಸುತ್ತಲೂ ಇತ್ತು ಒಂದು ದೊಡ್ಡ ಪಡೆ
ಆಕೆಯದು ಮೃದುವಾದ  ಮನಸು
ಮಾಡಲ್ಲ  ಯಾರಿಗೂ  ಮುನಿಸು

ಅದಕ್ಕೆ ಎಲ್ಲವನ್ನು ಹೇಳಿದ್ದಳು
ನಮ್ಮಿಬ್ಬರ  ರಹಸ್ಯವ  ಬಿಚ್ಚಿಟ್ಟಿದ್ದಳು
ಕಾಪಿ ಹೊಡೆದು ಸಿಕ್ಕಿ ಬಿದ್ದ ಅವಳು
ನನ್ನ  ಹೆಸರು  ಬಾಯಿ  ಬಿಟ್ಟಿದ್ದಳು 

No comments:

Post a Comment