Saturday, November 28, 2015

ಅವಳು ನಕ್ಕಳು

ಅಲ್ಲಿ ಹೋಗುತಿದ್ದ  ಅವಳು
ನನ್ನ  ನೋಡಿ ಮುಗುಳ್ನ ಕ್ಕಳು
ಅದ ನೋಡಿ ಕುಣಿಯಿತು ನನ್ನ ಹೊಕ್ಕಳು
ಹತೋಟಿ ತಪ್ಪಿದ ಮನವಾಯಿತು  ತಿಕ್ಕಲು

ಅಷ್ಟರಲ್ಲೇ  ಅವಳ ಗೆಳತಿಯ  ಬೈಕ್ ಲ್ಲಿ
ಕೈಯಿಟ್ಟು  ಅವಳ ಹೆಗಲಲ್ಲಿ
ಏನನ್ನೋ ಅವಳಿಗೆ ಗುನುಗುತ್ತ
ಹೋದರತ್ತ ಇಬ್ಬರು ನಗುತ್ತ

ಸರಿ ಎಂದು ನನ್ನ ಪಾಡಿಗೆ
ಕಾಯುತ್ತ  ನಿಂತೆ ನನ್ನ  ಬಸ್ಸಿಗೆ
ಅಲ್ಲಿ  ಬಂದ  ಮತ್ತೊಬ್ಬ ಸುಂದರಿ
ನಗುತ್ತ  ನಿಂತಳು  ನನ್ನ ನೋಡಿರಿ

ನಾನು ಖುಷಿಯಿ೦ದ
ಉಲ್ಲಾಸದ ಮನದಿಂದ
ಕೆಳಗೆ  ನೋಡಿ  ಆದೆ ಬೆಪ್ಪು
ತೆರೆದಿತ್ತಲ್ಲಿ ನನ್ನ ಪ್ಯಾಂಟ್  ಜಿಪ್ಪು







No comments:

Post a Comment