ಮಳೆಯಲಿ ನೆನಪಲಿ

 ನೆನೆಯುವ ಮಳೆಯಲಿ
ನೆನೆಯುತ ಅವಳಲ್ಲಿ
ನೆನಪಾದವು ಆ ಕ್ಷಣಗಳು
ಹೊತ್ತೊಯ್ದವು ಆ ದಿನಗಳು

ಭೇಟಿಯಾದ ಆ ವೇಳೆ
ಬೀಳುತಿತ್ತು ಜೋರ್ ಮಳೆ
ನಡುಗುತ್ತ ನಿಂತಿದ್ದಳಾಕೆ
ಮರೆತಿದ್ಲು ಛತ್ರಿ ತರೋಕೆ

ಆ ತೇವಾ ಸುಂದರಿಯ ನೋಡಿ
ನಿಂತವು ರಸ್ತೇಲಿ ಗಾಡಿ
ಮಾನವಿಯತೆಯಿಂದ ನಾ ಹೋದೆ ಅಲ್ಲಿ
ಇಟ್ಟೆ ನನ್ನ ಛತ್ರಿ ಅವಳ ಕೈಯಲ್ಲಿ

ಕಳೆದವು ಹಲ ದಿನಗಳು
ಅರಳಿದವು ಮರದಲಿ ಹೂಗಳು
ಇನ್ನು ಮರಳಿ ಕೊಟ್ಟಿಲ್ಲ  ಛತ್ರಿ
ಅದಕ್ಕೆ ಮಳೆ ಬಂದ್ರೆ  ಅವಳ ನೆನಪಾಗುತ್ರಿ

Comments